ಭಾರತದಲ್ಲಿ ಆಹಾರ ವ್ಯರ್ಥತೆ: ಪರಿಸರ ಮತ್ತು ಆರ್ಥಿಕತೆಯ ಮೇಲೆ ಪರಿಣಾಮಗಳು
ಭಾರತದಲ್ಲಿ ಮದುವೆ ಸಮಾರಂಭಗಳು, ಹಬ್ಬಗಳು, ಜಾತ್ರೆಗಳು ಸಾಂಸ್ಕೃತಿಕ ಪರಂಪರೆಯ ಭಾಗವಾಗಿವೆ. ಆದರೆ ಈ ಕಾರ್ಯಕ್ರಮಗಳಲ್ಲಿ ಆಹಾರ ವ್ಯವಸ್ಥೆ ಹೇಗಿರಬೇಕು ಎಂಬುದನ್ನು ಪ್ರತಿಷ್ಠೆಯ ದೃಷ್ಟಿಯಿಂದ ನೋಡಲಾಗುತ್ತದೆ. ಇದರಿಂದಾಗಿ ಅಗತ್ಯಕ್ಕಿಂತ ಹೆಚ್ಚಿನ ಆಹಾರ ಸಿದ್ಧಪಡಿಸಲಾಗುತ್ತಿದ್ದು, ಅದು ಬಹಳ ಪ್ರಮಾಣದಲ್ಲಿ ವ್ಯರ್ಥವಾಗುತ್ತಿದೆ. ಈ ಸಮಸ್ಯೆಯು ದೇಶದ ಆಹಾರ ಭದ್ರತೆ, ಪರಿಸರ, ಆರ್ಥಿಕತೆ ಮತ್ತು ಸಾಮಾಜಿಕ ಸಮತೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಭಾರತದಲ್ಲಿ ಆಹಾರ ವ್ಯರ್ಥತೆ ಸ್ಥಿತಿ:
-
ಮದುವೆ, ಹಬ್ಬ, ಜಾತ್ರೆ, ಹೊಟೇಲ್, ಕಾರ್ಯಕ್ರಮಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಆಹಾರ ತಯಾರಿಸಿ ಉಪಯೋಗವಿಲ್ಲದೆ ವ್ಯರ್ಥಗೊಳಿಸಲಾಗುತ್ತಿದೆ.
-
ಈ ಅಭ್ಯಾಸ ಹಳ್ಳಿಗಳಿಂದ ನಗರಗಳವರೆಗೂ ವಿಸ್ತಾರಗೊಂಡಿದೆ.
-
ಆಹಾರದ ವ್ಯರ್ಥದ ಸಮಸ್ಯೆ ಇದೀಗ ಜಾಗತಿಕ ಮಟ್ಟದಲ್ಲಿ ಆತಂಕದ ವಿಷಯವಾಗಿದೆ.
ಡೇಟಾ ಅಂಶಗಳು:
-
ಪ್ರತಿ ವರ್ಷ ಭಾರತದಲ್ಲಿ 7.82 ಕೋಟಿ ಟನ್ ಆಹಾರ ವ್ಯರ್ಥವಾಗುತ್ತದೆ.
-
ಪ್ರತಿ ಭಾರತೀಯನು ವರ್ಷಕ್ಕೆ ಸರಾಸರಿ 55 ಕೆ.ಜಿ ಆಹಾರ ವ್ಯರ್ಥ ಮಾಡುತ್ತಾನೆ.
-
ಭಾರತದಲ್ಲಿ ಹಸಿವಿನಿಂದ ಬಾಧಿತರ ಸಂಖ್ಯೆ 20 ಕೋಟಿ.
-
ನಗರ ಪ್ರದೇಶಗಳಲ್ಲಿ ತ್ಯಾಜ್ಯದ ಶೇ 10 ರಿಂದ 12% ಆಹಾರ ತ್ಯಾಜ್ಯವಾಗಿದೆ.
ಜಾಗತಿಕ ಮಟ್ಟದಲ್ಲಿ ಆಹಾರ ವ್ಯರ್ಥತೆ :
-
2024ರ ಆಹಾರ ವ್ಯರ್ಥ ಸೂಚ್ಯಂಕ ವರದಿ (FWIR) ಪ್ರಕಾರ,
→ 2022ರಲ್ಲಿ ಜಗತ್ತಿನಲ್ಲಿ 105 ಕೋಟಿ ಟನ್ ಆಹಾರ ವ್ಯರ್ಥವಾಗಿದೆ.
→ ಇದು ಜಗತ್ತಿನ ಶೇ 20 ಜನರ ಆಹಾರ ಅಗತ್ಯಕ್ಕೆ ಸಮಾನ. -
ಚೀನಾ, ಅಮೆರಿಕ, ಭಾರತ — ಇವು ಅತಿಹೆಚ್ಚು ಆಹಾರ ವ್ಯರ್ಥ ಮಾಡುವ ರಾಷ್ಟ್ರಗಳು.
ಆಹಾರ ವ್ಯರ್ಥತೆಯ ಪರಿಣಾಮಗಳು:
ಪರಿಸರದ ಮೇಲೆ ಪರಿಣಾಮ:
-
ಆಹಾರ ಉತ್ಪಾದನೆಗೆ ಅಗಾಧ ಭೂಮಿ, ನೀರು, ಗೊಬ್ಬರ, ಇಂಧನ ಬೇಕಾಗುತ್ತದೆ.
-
ಆಹಾರ ವ್ಯರ್ಥವಾದರೆ, ಈ ಸಂಪನ್ಮೂಲಗಳೆಲ್ಲಾ ವ್ಯರ್ಥವಾಗುತ್ತವೆ.
-
ಹಸಿರುಮನೆ ಅನಿಲಗಳ ಉತ್ಸರ್ಗದಲ್ಲಿ ಆಹಾರ ಉತ್ಪಾದನೆಯ ಪಾತ್ರ ಹೆಚ್ಚಿದೆ.
-
ಭಾರತವು ಚೀನಾ, ಅಮೆರಿಕದ ನಂತರ ಹಸಿರುಮನೆ ಅನಿಲ ಉತ್ಸರ್ಗದಲ್ಲಿ ಮೂರನೇ ಸ್ಥಾನದಲ್ಲಿದೆ.
ಆರ್ಥಿಕತೆಯ ಮೇಲೆ ಪರಿಣಾಮ:
-
ಆಹಾರ ವ್ಯರ್ಥದಿಂದ ಆರ್ಥಿಕ ಸಂಪತ್ತಿನ ನಾಶ ಸಂಭವಿಸುತ್ತದೆ.
-
ರೈತರ ದುಡಿಮೆ ವ್ಯರ್ಥವಾಗುತ್ತದೆ.
-
ಆಹಾರ ಸರಪಳಿಯ ಎಲ್ಲಾ ಹಂತಗಳಲ್ಲಿ ವ್ಯರ್ಥತೆ ಆರ್ಥಿಕ ದೋಷವನ್ನು ಉಂಟುಮಾಡುತ್ತದೆ.
ಸಾಮಾಜಿಕ ಪರಿಣಾಮ:
-
ಆಹಾರ ಎಲ್ಲರಿಗೂ ಲಭ್ಯವಿಲ್ಲದಿರುವುದು ಹಸಿವಿನ ಸಮಸ್ಯೆ ಹೆಚ್ಚಾಗುವುದಕ್ಕೆ ಕಾರಣ.
-
ರಾಷ್ಟೀಯ ಆಹಾರ ಭದ್ರತಾ ಯೋಜನೆಗೂ ಹೊಡೆತ.
-
ಜಾಗತಿಕ ಮಟ್ಟದಲ್ಲಿ SDG-2 (Zero Hunger) ಗುರಿಗೆ ವಿರೋಧಿ ಪರಿಣಾಮ.
ಆಹಾರ ವ್ಯರ್ಥತೆಗೆ ಕಾರಣಗಳು:
-
ಅಗತ್ಯಕ್ಕಿಂತ ಹೆಚ್ಚು ಆಹಾರ/ದಿನಸಿ ಖರೀದಿಸುವುದು.
-
ಅಡುಗೆ ಮತ್ತು ಸೇವನೆಯ ಲೆಕ್ಕಾಚಾರ ಇಲ್ಲದಿರುವುದು.
-
ಶೀತಲೀಕರಣ ಮತ್ತು ಸಂಗ್ರಹ ವ್ಯವಸ್ಥೆಗಳ ಕೊರತೆ.
-
ಮದುವೆ/ಹಬ್ಬಗಳಲ್ಲಿ ಅದ್ಧೂರಿಯಾಗಿ ಆಹಾರ ತಯಾರಿ.
-
ಹೊಟೇಲ್‌ಗಳಲ್ಲಿ ಉಳಿದ ಆಹಾರವನ್ನು ಸರಿಯಾಗಿ ಉಪಯೋಗಿಸದಿರುವುದು.
ಆಹಾರ ವ್ಯರ್ಥ ತಡೆಯುವ ಮಾರ್ಗಗಳು:
-
ವೈಯಕ್ತಿಕ ಹಂತದಲ್ಲಿ ಹಿತಮಿತ ಆಹಾರ ಸೇವನೆ ಮತ್ತು ಸಮರ್ಪಕ ಯೋಜನೆ.
-
ಮನೆಗಳಲ್ಲಿ ಉಚಿತ ಶೇಖರಣಾ ವ್ಯವಸ್ಥೆ ಅಭಿವೃದ್ಧಿ.
-
ಉಳಿದ ಆಹಾರವನ್ನು ಬಡವರ, ಆಶ್ರಮಗಳ, ಹಾಸ್ಟೆಲ್‌ಗಳೊಂದಿಗೆ ಹಂಚಿಕೆ.
-
ಉಳಿದ ಆಹಾರದಿಂದ ಕಾಂಪೋಸ್ಟ್ ತಯಾರಿಕೆ.
-
ಸಮಾರಂಭಗಳಲ್ಲಿ ಆಹಾರದ ಸರಿಯಾದ ಲೆಕ್ಕಾಚಾರ ಮತ್ತು ನಿಗಾವಹಣೆ.
-
ಅತಿಥಿಗಳಿಗೆ ಪ್ಯಾಕ್ ಮಾಡಿ ನೀಡುವುದು, ಅಥವಾ ಸನ್ನಿಹಿತ ಸೇವಾ ಸಂಸ್ಥೆಗಳೊಂದಿಗೆ ಹಂಚಿಕೆ.
-
ಸರ್ಕಾರದಿಂದ ಕಠಿಣ ನೀತಿಗಳನ್ನು ರೂಪಿಸಿ ಕಾರ್ಯಾನ್ವಯಗೊಳಿಸುವುದು.
-
ಪುನರ್‌ಹಂಚಿಕೆ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುವುದು.
-
ಜಾಗೃತಿ ಮೂಡಿಸುವ ಅಭಿಯಾನಗಳು, ಶಿಕ್ಷಣ ಚಟುವಟಿಕೆಗಳು ನಡೆಸುವುದು.
ಜಾಗತಿಕ ಸುಸ್ಥಿರ ಅಭಿವೃದ್ಧಿ ಗುರಿಗಳು (SDGs):
-
SDG 2 – 2030ರೊಳಗೆ ಹಸಿವನ್ನು ಅಳಿಸುವ ಗುರಿ.
-
SDG 12.3 – ಮಾರುಕಟ್ಟೆ ಮತ್ತು ಗ್ರಾಹಕ ಹಂತದಲ್ಲಿ ಆಹಾರ ನಷ್ಟ ಮತ್ತು ವ್ಯರ್ಥವನ್ನು ಅರ್ಧಕ್ಕೆ ಕಡಿಮೆ ಮಾಡುವುದು.
ಉಪಸಂಹಾರ:
ಆಹಾರ ವ್ಯರ್ಥವು ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಾಂತ ಗಂಭೀರ ಸಮಸ್ಯೆಯಾಗಿದ್ದು, ಪರಿಸರ, ಆರ್ಥಿಕತೆ, ಮತ್ತು ಸಾಮಾಜಿಕ ಸಮತೆ ಮೇಲೆ ಪರಿಣಾಮ ಬೀರುತ್ತದೆ. ಭಾರತವು ತನ್ನ ಅಭಿವೃದ್ಧಿ ಮಾರ್ಗದಲ್ಲಿ ಮುಂದುವರಿಯಬೇಕೆಂದರೆ, ಈ ಸಮಸ್ಯೆಗೆ ಗಂಭೀರವಾಗಿ ನಿಭಾಯಿಸಬೇಕಾಗುತ್ತದೆ. ಇದಕ್ಕಾಗಿ ಸರ್ಕಾರ, ಸಮಾಜ, ಹಾಗೂ ಪ್ರತಿಯೊಬ್ಬ ನಾಗರಿಕನೂ ತಮ್ಮ ಪಾತ್ರ ನಿರ್ವಹಿಸಬೇಕಾಗಿದೆ.
Comments (0)