UPSC 2024 ಫಲಿತಾಂಶ ಪ್ರಕಟ

ಯುಪಿಎಸ್ಸಿ 2024 ಫಲಿತಾಂಶ ಪ್ರಕಟ : ಕರ್ನಾಟಕದಲ್ಲಿ ಹೊಸ ಮೈಲಿಗಲ್ಲು ಬರೆದ ಅಕ್ಕ ಐಎಎಸ್ ಅಕಾಡೆಮಿ

ಯುಪಿಎಸ್ಸಿ 2024 ರ ಫಲಿತಾಂಶ ಇತ್ತೀಚಿಗೆ ಪ್ರಕಟಗೊಂಡಿದ್ದು   ಅಕ್ಕ ಐಎಎಸ್ ಅಕಾಡೆಮಿಯ ಹಲವಾರು ವಿದ್ಯಾರ್ಥಿಗಳು ತಮ್ಮ ಕೊರಳಿಗೆ ವಿಜಯದ ಮಾಲೆ ಧರಿಸಿದ್ದಾರೆ.
ಅಕ್ಕ ಐಎಎಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಸುಮಾರು ಎಂಟು ಜನ ಅಭ್ಯರ್ಥಿಗಳ ಹೆಸರು ಅಂತಿಮ ಫಲಿತಾಂಶದಲ್ಲಿದೆ.

ಅಕ್ಕ ಐಎಎಸ್ ಅಕಾಡೆಮಿಯ ಈ ವಿದ್ಯಾರ್ಥಿಗಳ ಪರಿಶ್ರಮ ಅವರ ಮನೆಗೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಒಂದು ಭರವಸೆಯನ್ನು ನೀಡಿದೆ. 


ಹೌದು.. ಹಣವಿಲ್ಲದಿದ್ದರೂ, ಅಧಿಕಾರದ ಬೆನ್ನೆಲುಬಿಲ್ಲದಿದ್ದರೂ ಐಎಎಸ್ ಆಗಬಹುದು ಎಂದು ಕನಸು ಕಟ್ಟಿಕೊಂಡು ಬಂದಿದ್ದ ಅಭ್ಯರ್ಥಿಗಳನ್ನು ಆಫೀಸರ್ ಮಾಡುವಲ್ಲಿ ಅಕ್ಕ ಐಎಎಸ್ ಅಕಾಡೆಮಿ ಯಶಸ್ವಿಯಾಗಿದೆ.
ಇಂದು ವಿಜಯ ಗಳಿಸಿದ ಅಭ್ಯರ್ಥಿಗಳು ಇಡೀ ಕರ್ನಾಟಕಕ್ಕೂ ಹೆಮ್ಮೆಗೆ ಕಾರಣವಾಗಿದ್ದಾರೆ.

 

ಕರ್ನಾಟಕದ ಐಎಎಸ್ ಸಾಧನೆಯ ಬೆನ್ನೆಲುಬು :
ಅಕ್ಕ ಐಎಎಸ್ ಅಕಾಡೆಮಿಯ ಉತ್ತಮ ಗುಣಮಟ್ಟದ ತರಬೇತಿ, Mentorship ನೀಡುವಿಕೆ ಹಾಗೂ Dr.ಶಿವಕುಮಾರ್ ಸರ್ಮಾರ್ಗದರ್ಶನವೇ ಇಂದು ಕರ್ನಾಟಕವೇ ಹೆಮ್ಮೆ ಪಡುವಂತಹ ಸಾಧನೆಯ ತಳಹದಿ ಎನ್ನಬಹದು.


ಅವರ ಉತ್ತಮ ಮಾರ್ಗದರ್ಶನ, ಪ್ರತಿ ದಿನ ತೋರುವ ಕಾಳಜಿ ಈ ಫಲಿತಾಂಶದ ರೂಪದಲ್ಲಿ ಫಲ ನೀಡಿದೆ.

 

ಈ ವರ್ಷ ಯು ಪಿ ಎಸ್ ಸಿ 2024 ರ ಫಲಿತಾಂಶ ದಲ್ಲಿ ಸಾಧನೆಗೈದ ಅಕ್ಕ ಐಎಎಸ್ ಅಕಾಡೆಮಿಯ ವಿದ್ಯಾರ್ಥಿಗಳು:

  • ಪೂಲ ಧನುಷ್ —232 ನೇ Rank
  • ಬಿ. ಎಂ. ಮೇಘನಾ — 425 ನೇ Rank
  • ಡಾ .ಭಾನು ಪ್ರಕಾಶ್ — 523 ನೇ Rank
  • ಭರತ್ ಸಿ ಯಾರಂ — 567 ನೇ Rank
  • ನಿಖಿಲ್ ಎಂ.ಆರ್ — 724  ನೇ Rank
  • ಟಿ. ವಿಜಯಕುಮಾರ್ - 894  ನೇ Rank
  • ಹನುಮಂತಪ್ಪ ನಂದಿ —910  ನೇ Rank
  • ಮೋಹನ್ ಪಾಟೀಲ್ — 984  ನೇ Rank

 

ಇಷ್ಟೇ ಅಲ್ಲ, ಇನ್ನೂ ಹಲವಾರು ಅಕ್ಕ ಐಎಎಸ್ ಅಕಾಡೆಮಿಯ ಯಶಸ್ಸಿನ ಕಥೆಗಳು ಇನ್ನು ದಿನಂಪ್ರತಿ ನಿಮ್ಮ ಮುಂದೆ ಬರಲಿದೆ.


ಅಕ್ಕ ಐಎಎಸ್ ಅಕಾಡೆಮಿಯ ವೈಶಿಷ್ಟ್ಯವೇನು?
ಅಕ್ಕ ಐಎಎಸ್ ಅಕಾಡೆಮಿಯಲ್ಲಿ, ನಾವು ಯಶಸ್ಸನ್ನು ಕೇವಲ ಪರೀಕ್ಷೆ ಯಲ್ಲಿ ವಿಜಯ ಗಳಿಸುವುದು ಮಾತ್ರ ಎಂದು ಅಂದುಕೊಂಡಿಲ್ಲ. ಯಶಸ್ಸು ನಮ್ಮಲ್ಲಿ ನಿರಂತರ ಪ್ರಕ್ರಿಯೆ. ನಾವು ಇಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಬ್ಜೆಕ್ಟ್ ನ್ನು ಪೂರ್ತಿ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುವಂತೆ ನಮ್ಮ ಭೋದನಾ ವಿಧಾನವನ್ನು ನಿರೂಪಿಸಿದ್ದೇವೆ.

ನಮ್ಮ ಅಕಾಡೆಮಿಯ ವೈಯಕ್ತಿಕ ಮಾರ್ಗದರ್ಶನ, ಗುರಿ ಸಾಧಿಸುವ ತಂತ್ರಗಳು ಮತ್ತು ಸಮಗ್ರ ಬೆಂಬಲ ವ್ಯವಸ್ಥೆಗಳು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಯಶಸ್ಸಿಗೆ ದಾರಿ ಕಾಣಿಸುವಲ್ಲಿ ಮಹತ್ವಪೂರ್ಣ ಪಾತ್ರವಹಿಸಿವೆ.

ಈ ವರ್ಷದ ಫಲಿತಾಂಶಗಳು ಕೇವಲ ನಮ್ಮ ವಿದ್ಯಾರ್ಥಿಗಳ ಪರಿಶ್ರಮವನ್ನು ಪ್ರತಿಬಿಂಬಿಸುವುದೇ ಅಲ್ಲ, ಅಕ್ಕ ಐಎಎಸ್ ಅಕಾಡೆಮಿಯ ಒದಗಿಸುವ ಅತ್ಯುತ್ತಮ ತರಬೇತಿ, ಓದುವ ಸಮಯದಲ್ಲಿ ನೀಡಿದ ಮಾರ್ಗದರ್ಶನ ಮತ್ತು ಸಂಪನ್ಮೂಲಗಳ ಉತ್ತಮ ರೀತಿಯ ಬಳಕೆಯನ್ನು ಕೂಡ ಪ್ರತಿಬಿಂಬಿಸುತ್ತವೆ. 

ನಮ್ಮ ವಿದ್ಯಾರ್ಥಿಗಳಿಗೆ, ಪ್ರಖ್ಯಾತ ಶಿಕ್ಷಕರೊಂದಿಗೆ ದೈನಂದಿನ ಸಂವಹನ, ವಿಶೇಷ ಕಾರ್ಯಾಗಾರಗಳು ಇವುಗಳನ್ನು ಅತ್ಯುತ್ತಮವಾಗಿ ನಾವು ನಡೆಸಿದುದೇ ಇಂದಿನ ಫಲಿತಾಂಶದ ಆಧಾರ.

 

ಯುಪಿಎಸ್ಸಿ 2024 ರ ಫಲಿತಾಂಶದಲ್ಲಿ ಹೆಸರು ಪಡೆದ ನಮ್ಮ  ಅಕಾಡೆಮಿಯ ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ನಮ್ಮ ಜವಾಬ್ದಾರಿ, ನಿಮ್ಮ ಪರಿಶ್ರಮದ ಫಲವೇ ಈ ಮಹತ್ಸಾಧನೆಯ ರೂವಾರಿ.

 

ನಿಮ್ಮ ಪಯಣಕ್ಕೆ ಅಕ್ಕ ಐಎಎಸ್ ಅಕಾಡೆಮಿ ಸಾಥ್ ನೀಡುತ್ತದೆ.
ಸುಮಾರು ವರ್ಷಗಳಿಂದ ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡುತ್ತಿರುವ ಅಕ್ಕ ಐಎಎಸ್ ಅಕಾಡೆಮಿ ಎಂದಿಗೂ ನಿಮ್ಮ ಐಎಎಸ್ ಕನಸಿನ ಪ್ರಾಮಾಣಿಕ ಸ್ನೇಹಿತನಾಗಿರುತ್ತದೆ. 

 

ನಮ್ಮ ಗುರಿ ಇಷ್ಟೇ - ಕನಸುಗಳನ್ನು ಸಾಧಿಸುವುದು, ನಾಯಕತ್ವವನ್ನು ರೂಪಿಸುವುದು ಮತ್ತು ಫಲಿತಾಂಶಗಳನ್ನು ನೀಡುವುದು.

ನೀವು ಸಾಧಿಸಬೇಕೆಂದಿದ್ದೀರಾ ? - ಸಂಕೋಚವಿಲ್ಲದೆ ನಿಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಲು ನಮ್ಮನ್ನು ಸಂಪರ್ಕಿಸಿ -  : 9560863287, 7349373737 , akkaiasacademy@gmail.com

Share:

Comments (0)


comments